'ಬಿಗ್ ಬಾಸ್ ಕನ್ನಡ' ಇತಿಹಾಸದಲ್ಲಿ ತರಹೇವಾರಿ ವಿಷಯಗಳಿಗೆ ದೊಡ್ಡ ದೊಡ್ಡ ರಾದ್ಧಾಂತಗಳು ನಡೆದು ಹೋಗಿವೆ. ಆದ್ರೆ, ಬರೀ ಊಟ, ತಿಂಡಿ, ಅಡುಗೆ, ಹಣ್ಣು, ಐಸ್ ಕ್ರೀಮ್, ಬಿಸ್ಕತ್ತುಗಳಿಗೆ ಚಿಕ್ಕ ಮಕ್ಕಳಂತೆ ಪದೇ ಪದೇ ಕಿತ್ತಾಟ ನಡೆದಿರುವುದು 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಮಾತ್ರ.! ಹಾಲಿನ ಪ್ಯಾಕೆಟ್ ಗಳನ್ನು ಮುಚ್ಚಿಟ್ಮೇಲೆ ''ಜನರ ಮುಂದೆ ನೀವು ಹೇಗೆ ಕಾಣಿಸುತ್ತಿದ್ದೀರಾ, ಸ್ವಲ್ಪ ಯೋಚಿಸಿ'' ಎಂದು ಸುದೀಪ್ ಹೇಳಿದ್ಮೇಲೂ, 'ಬಿಗ್ ಬಾಸ್' ಮನೆಯಲ್ಲಿ ತಿನ್ನುವ ವಿಚಾರಕ್ಕೆ ಗಲಾಟೆ ನಿಂತಿಲ್ಲ.! ತಿನ್ನಲು ಎಲ್ಲರಿಗೂ ಆಸೆ ನಿಜ. ಆದ್ರೆ, ಎಲ್ಲರಿಗೂ ಸಮನಾಗಿ ಹಂಚಿ ತಿಂದರೆ ಸಮಸ್ಯೆ ಆಗಲ್ಲ. ಅದು ಬಿಟ್ಟು... ಮುಚ್ಚಿಟ್ಟು, ಬಚ್ಚಿಟ್ಟು, ಕದ್ದು ತಿಂದು, ಬೇಕಾದವರಿಗೆ ಮಾತ್ರ ಹಂಚುವ ಪ್ರಯತ್ನ ನಡೆಯುತ್ತಿರುವುದರಿಂದ 'ಬಿಗ್ ಬಾಸ್' ಮನೆ ಆಗಾಗ ರಣರಂಗವಾಗುತ್ತಿದೆ. ಮುಂದೆ ಓದಿರಿ...ಸದ್ಯ ಅಡುಗೆ ಮನೆಯ ಜವಾಬ್ದಾರಿ ವಹಿಸಿಕೊಂಡಿರುವವರು ಸಿಹಿ ಕಹಿ ಚಂದ್ರು ಹಾಗೂ ಅನುಪಮಾ ಗೌಡ. ಬೆಳಗ್ಗಿನ ಉಪಹಾರಕ್ಕಾಗಿ ಸಿಹಿ ಕಹಿ ಚಂದ್ರು ಉಪ್ಪಿಟ್ಟು ಮಾಡಿದ್ದು ಜಗನ್ ಗೆ ಇಷ್ಟ ಆಗಿಲ್ಲ. ಒಂದು ಸೌಟು ಉಪ್ಪಿಟ್ಟು ಹಾಕಿದರೆ ಸಾಲಲ್ಲ, ಹೊಟ್ಟೆ ಹಸಿವಾಗುತ್ತದೆ ಎಂಬ ವಾದ ಜಗನ್ ರವರದ್ದು. ಇದೇ ಕಾರಣಕ್ಕೆ ಜಗನ್ ಹಾಗೂ ಅನುಪಮಾ ನಡುವೆ ವಾದ-ವಾಗ್ವಾದ ಕೂಡ ನಡೆಯಿತು.
big boss season 05 : big boss is a one of the big reality show in colors super, this big house members are fighting for biskates and ice cream